ಆಹ್ವಾನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಆಹ್ವಾನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಬುಧವಾರ, ಡಿಸೆಂಬರ್ 31, 2014

ಬಹುಮಾನ ವಿತರಣಾ ಸಮಾರಂಭ

"ಲೇಖನಿಯ ಶಾಯಿಯ ನೀಲಿ ಅಲೆಗಳು "



ಯುವ ಲೇಖಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬ್ಲೂ ವೇವ್ಸ್ ಫೇಸ್ಬುಕ್ ಬಳಗದ ಆಯೋಜಿಸಲ್ಪಟ್ಟ ಲೇಖನ ಸ್ಪರ್ಧೆಯಲ್ಲಿ 

ವಿಜೇತರಾದ ಯುವ ಬರಹಗಾರರಿಗೆ ಬಹುಮಾನ ವಿತರಣಾ ಸಮಾರಂಭ

ಸ್ಥಳ : ಹೋಟೆಲ್ ದುರ್ಗಾ ಇಂಟರ್ನ್ಯಾಷನಲ್, ಉಡುಪಿ
ದಿನಾಂಕ : 11-01-2015


ನಮ್ಮೊಂದಿಗಿರುತ್ತಾರೆ :


ಪ್ರೊ। ಮುರಳೀಧರ ಉಪಾಧ್ಯ, ಹಿರಿಯಡ್ಕ , ಕನ್ನಡ ವಿಭಾಗದ ಮುಖ್ಯಸ್ಥರು, ಪಿ.ಪಿ.ಸಿ ಕಾಲೇಜು

ಯೋಗೇಶ್ ಮಾಸ್ಟರ್, ಸಾಹಿತಿ ಮತ್ತು ರಂಗಕರ್ಮಿ

ಡಾ।ಹಸೀನಾ ಖಾದ್ರಿ, ಇತಿಹಾಸ ಪ್ರಾಧ್ಯಾಪಕರು, ಕುವೆಂಪು ವಿಶ್ವವಿಧ್ಯಾನಿಲಯ, ಶಿವಮೊಗ್ಗ,

ಎ.ಕೆ ಕುಕ್ಕಿಲ, ಲೇಖಕರು, ಸಂಪಾದಕರು, ಸನ್ಮಾರ್ಗ ವಾರಪತ್ರಿಕೆ


ಬನ್ನಿ, ಭಾಗವಹಿಸಿ, ಪ್ರಜ್ಞಾವಂತ ಯುವ ಶಕ್ತಿಗಳ ನಿರ್ಮಾಣದ ಆಶಯವನ್ನು ಪ್ರೋತ್ಸಾಹಿಸಿ,


ತಮಗೆಲ್ಲರಿಗೂ ಆದರದ ಸ್ವಾಗತ ಬಯಸುವ,
ಟೀಮ್ ಬ್ಲೂ ವೇವ್ಸ್

ಶುಕ್ರವಾರ, ನವೆಂಬರ್ 28, 2014



                                                           ****** ಬ್ಲೂ ವೇವ್ಸ್ ಪತ್ರಿಕಾಗೋಷ್ಠಿ ******

ಎಲೆಮರೆಯ ಬರಹಗಾರರನ್ನು ಗುರುತಿಸುವ, ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬ್ಲೂ ವೇವ್ಸ್-ನ ಮೊದಲ ಹೆಜ್ಜೆ 'ನಿಕ್ಷೇಪ -2014' ಈ ಸಾಹಿತ್ಯ ಸ್ಪರ್ಧೆಯನ್ನು ನಾಡಿನ ಮೂಲೆ ಮೂಲೆಗೂ ತಲುಪಿಸುವ ದಿಸೆಯಲ್ಲಿ ಟೀಂ ಬ್ಲೂ ವೇವ್ಸ್ ಯಶಸ್ವಿಯಾಗಿ ಪತ್ರಿಕಾಗೋಷ್ಠಿಯನ್ನು ನಡೆಸಿತು.

-Team Blue Waves 

ಭಾನುವಾರ, ನವೆಂಬರ್ 9, 2014

ಬ್ಲೂ ವೇವ್ಸ್ : ನಿಕ್ಷೇಪ- 2014 : ಯುವ ಬರಹಗಾರರಿಂದ ಕನ್ನಡ ಬರಹಗಳಿಗೆ ಆಹ್ವಾನ



ಕನ್ನಡ ಯುವ ಬರಹಗಾರರ ಸಾಮಾಜಿಕ ಜಾಲತಾಣದ ಸಾಹಿತ್ಯ ವೇದಿಕೆ ಬ್ಲೂ ವೇವ್ಸ್ (ನೀಲಿ ಅಲೆಗಳು) ಫೇಸ್ಬುಕ್ ಪೇಜ್ ಬಳಗದ ವತಿಯಿಂದ ಕನ್ನಡದ ಯುವ ಬರಹಗಾರರನ್ನು ಗುರುತಿಸುವ ಮತ್ತು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಿಕ್ಷೇಪ - 2014 (ನವ ಚಿಂತನೆಗಳ ಅಗೆತ) ಎಂಬ ಸ್ಪರ್ಧೆಯಡಿ ಏಳು ಪ್ರಸಕ್ತ ವಿದ್ಯಮಾನಗಳ ಕುರಿತು ಲೇಖನಗಳನ್ನು ಆಹ್ವಾನಿಸಲಾಗಿದೆ. ಪ್ರಜ್ಞಾವಂತ ಸೃಜನಶೀಲ ಯುವ ಬರಹಗಾರರು ಇದರಲ್ಲಿ ಪಾಲ್ಗೊಳ್ಳಬಹುದು. 

ವಿಷಯಗಳು ಇಂತಿವೆ.
೧. ಮಾಧ್ಯಮ - ಪೂರ್ವಾಗ್ರಹ ಮತ್ತು ನೈತಿಕತೆ
೨. ಶಿಕ್ಷಣ ವ್ಯವಸ್ಥೆ ಲೋಪದೋಷಗಳು ಮತ್ತು ಸುಧಾರಣೆ ಮಾರ್ಗಗಳು
೩. ಅಲ್ಪಸಂಖ್ಯಾತ ಮತ್ತು ದಲಿತರ ಹಿನ್ನೆಡೆ ಮತ್ತು ಪರಿಹಾರೋಪಾಯಗಳು
೪. ಪ್ರಸಕ್ತ ಮತ್ತು ನನ್ನ ಕನಸಿನ ಭಾರತ
೫. ಯುವಜನತೆ - ಅಭಿರುಚಿಗಳು, ನೈತಿಕತೆ ಮತ್ತು ಸಾಮಾಜಿಕ ಹೊಣೆಗಾರಿಕೆ
೬. ಭಾರತದಲ್ಲಿ ಭಯೋತ್ಪಾದನೆ - ಮೂಲಗಳು ಮತ್ತು ನಿಗ್ರಹ ಮಾರ್ಗಗಳು.
೭. ಯುವಜನತೆ -ಸಾಮಾಜಿಕ ತಾಣ ಉಪಯೋಗಿಸಬೇಕಾದ ಪರಿ ಮತ್ತು ದಾರಿ ತಪ್ಪುತ್ತಿರುವ ರೀತಿ

ಬಹುಮಾನಗಳ ವಿವರ:
• ಮೊದಲ ಬಹುಮಾನ ರೂ.25,000 ಮತ್ತು ಪ್ರಶಸ್ತಿ ಪತ್ರ
• ದ್ವೀತಿಯ ಬಹುಮಾನ ರೂ.15,000 ಮತ್ತು ಪ್ರಶಸ್ತಿ ಪತ್ರ
• ತೃತೀಯ ಬಹುಮಾನ ರೂ10,000 ಮತ್ತು ಪ್ರಶಸ್ತಿ ಪತ್ರ
• ಭಾಗವಹಿಸಿದ ಉತ್ತಮ ಬರಹಗಾರರಿಗೆ ಪ್ರಮಾಣ ಪತ್ರಗಳನ್ನು ನೀಡಲಾಗುತ್ತದೆ.

ಸ್ಪರ್ಧೆಯ ನಿಯಮಗಳು:
• ಲೇಖನ ಸ್ವಂತದ್ದಾಗಿರಬೇಕು; ಅಪ್ರಕಟಿತವಾಗಿರಬೇಕು (ಬ್ಲಾಗ್/ವೆಬ್‌ಸೈಟ್‌ಗಳಲ್ಲೂ ಪ್ರಕಟವಾಗಿರಬಾರದು),• ಕನಿಷ್ಟ 1500 ಪದಗಳದ್ದಾಗಿರಬೇಕು.• ಲೇಖನ ಕೃತಿ ಚೌರ್ಯವಾಗಿರಬಾರದು.
• ಒಬ್ಬರು ಎಲ್ಲ ವಿಷಯಗಳ ಮೇಲೆ ಬರೆಯಬಹುದು. (ಆದರೆ ಪ್ರತ್ಯೇಕವಾಗಿ ಕಳುಹಿಸತಕ್ಕದ್ದು).• ವಯೋಮಿತಿ 16 ರಿಂದ 30 ವಯಸ್ಸು.
• ಲೇಖನದೊಂದಿಗೆ ಪಾಸ್ಪೋರ್ಟ್ ಸೈಜ್ ಭಾವಚಿತ್ರ, ವಿಳಾಸ ಮತ್ತು ಫೇಸ್ಬುಕ್ ಖಾತೆಯ ಲಿಂಕ್ ಕಳುಹಿಸತಕ್ಕದ್ದು.
• ಲೇಖನವನ್ನು ಕಳುಹಿಸಬೇಕಾದ ಕೊನೆಯ ದಿನಾಂಕ 15 ಡಿಸೆಂಬರ್ 2014.
• 19 ಡಿಸೆಂಬರ್ 2014 ಕ್ಕೆ ಫಲಿತಾಂಶ ಪ್ರಕಟ.
• ಸ್ವೀಕೃತ ಉತ್ತಮ ಬರಹಗಳನ್ನು ಪ್ರಕಟಿಸುವ ಹಕ್ಕು ಸಂಯೋಜಕರದ್ದಾಗಿರುತ್ತದೆ.• ಲೇಖಕರು ಪೂರ್ಣವಾಗಿ ಸಿದ್ಧವಾದ ತಮ್ಮ ಲೇಖನವನ್ನು ಸ್ಪಷ್ಟ ಕೈಬರಹ (ಸ್ಕ್ಯಾನ್ ಮಾಡಿದ ಇಮೇಜ್ ಅಥವಾ ಪಿಡಿಎಫ್ ರೂಪದಲ್ಲಿ) ಯಾ ನುಡಿ/ಬರಹ/ಯೂನಿಕೋಡ್ ರೂಪದಲ್ಲಿ ಬೆರಳಚ್ಚಿಸಿ admin@bluewavespage.com ಇಮೇಲ್ ಗೆ ಕಳುಹಿಸಿ ಕೊಡಬೇಕು.

ಫಲಿತಾಂಶ ವಿವರಗಳು :
• ಬಹುಮಾನ ವಿಜೇತ ಬರಹಗಾರರ ಹೆಸರನ್ನು ಬ್ಲೂ ವೇವ್ಸ್ ಪೇಜ್,ಸಾಮಾಜಿಕ ತಾಣಗಳಲ್ಲಿ ಮತ್ತು ಕನ್ನಡ ಪತ್ರಿಕೆಗಳಲ್ಲಿ ಪ್ರಕಟಿಸಲಾಗುವುದು.
• ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು 21 ಡಿಸೆಂಬರ್ 2014 ರಂದು ನಡೆಯುವ ಸಮಾರಂಭದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ವಿತರಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಭೇಟಿ ಕೊಡಿ:
www.facebook.com/BlueWavesPage

ಧನ್ಯವಾದಗಳೊಂದಿಗೆ,
ಟೀಂ ಬ್ಲೂ ವೇವ್ಸ್

ಕನ್ನಡ ಯುವ ಬರಹಗಾರರಿಗೆ ನಮ್ಮ ಪ್ರಥಮ ವೇದಿಕೆ


ಬುಧವಾರ, ಅಕ್ಟೋಬರ್ 1, 2014

ಶುಭಾರಂಭವಾಗಲಿರುವ "ಬ್ಲೂ ವೇವ್ಸ್ (ನೀಲಿ ತೆರೆಗಳು)" ಫೇಸ್ಬುಕ್ ಪೇಜ್

ಭಾನುವಾರ ಶುಭಾರಂಭವಾಗಲಿರುವ "ಬ್ಲೂ ವೇವ್ಸ್ (ನೀಲಿ ತೆರೆಗಳು)" ಫೇಸ್ಬುಕ್ ಪೇಜ್




ಸಾಮಾಜಿಕ ಜಾಲತಾಣಗಳ ಅವಕಾಶಗಳನ್ನು ಸದುಪಯೋಗಪಡಿಸಿ ಯುವ ಬರಹಗಾರರನ್ನು ಒಂದೇ ವೇದಿಕೆಯಡಿ ಸಜ್ಜುಗೊಳಿಸಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ "ಬ್ಲೂ ವೇವ್ಸ್" ಫೇಸ್ಬುಕ್ ಪೇಜ್ ಇದೇ ಬರುವ ಭಾನುವಾರ, 2014 ಅಕ್ಟೋಬರ್ 5ರಂದು ಲೋಕಾರ್ಪಣೆಗೊಳ್ಳಲಿದೆ. ಫೇಸ್ಬುಕ್ ನಂಥಹ ಸಾಮಾಜಿಕ ತಾಣದಲ್ಲಿ ತಮ್ಮ ವಿಶಿಷ್ಟ ಬರವಣಿಗೆಯ ಮೂಲಕ ಅಕ್ಷರಲೋಕದಲ್ಲಿ ಮಿಂಚುತ್ತಿರುವ ಹಲವಾರು ಎಲೆಮರೆಕಾಯಿಗಳಿಗೆ ಈ ವೇದಿಕೆ ಹೊಸ ಅವಕಾಶಗಳನ್ನು ಒದಗಿಸಲಿದೆ. 

ಫೇಸ್ಬುಕ್ನಲ್ಲಿ ಮತ್ತು ಬ್ಲಾಗ್ ಲೋಕದಲ್ಲಿ ಸಕ್ರಿಯರಾಗಿರುವ ಯುವಕರ ಗುಂಪು "ಬ್ಲೂ ವೇವ್ಸ್" ನ ರುವಾರಿಗಳಾಗಿದ್ದು, ಸಾಹಿತ್ಯ ಲೋಕದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸುವಲ್ಲಿ ದಿಟ್ಟ ಹೆಜ್ಜೆಯನ್ನಿಟ್ಟಿದೆ. ಹೊಸ ತಲೆಮಾರಿನ ಯುವ ಬರಹಗಾರರನ್ನು ಒಟ್ಟುಗೂಡಿಸುವುದು ಅವರ ಸಾಹಿತ್ಯವನ್ನು ಆಸ್ವಾದಿಸುವುದು ಮತ್ತು ಅವರಿಗೆ ಪ್ರೋತ್ಸಾಹ ನೀಡುವುದೇ "ಬ್ಲೂ ವೇವ್ಸ್"ನ ಧ್ಯೇಯೋದ್ದೇಶ ಎಂದು ನಿರ್ವಾಹಕ ತಂಡ ತಿಳಿಸಿದೆ. ಜೊತೆಗೆ ಫೇಸ್ಬುಕ್ನಂಥಹ ಸಾಮಾಜಿಕ ತಾಣಗಳಲ್ಲಿ ಹಲವು ಕಪೋಲ ಕಲ್ಪಿತ ವಿಷಯಗಳನ್ನು ತೂರಿ ಬಿಡುವ ಆ ಮೂಲಕ ಮನಸ್ಸು ಮನಸ್ಸುಗಳ ನಡುವಿನ ಸಾಮರಸ್ಯಗಳನ್ನು ಒಡೆಯುವ,ಸಮಾಜದ ಆರೋಗ್ಯವನ್ನು ಹಾನಿಗೆಡವುವ ವ್ಯವಸ್ತಿತ ಸಂಚುಗಳು ತಲೆಯೆತ್ತಿ ನಿಂತಿರುವ ಇಂದಿನ ಸನ್ನಿವೇಶದಲ್ಲಿ ಅದರ ವಿರುದ್ದವೂ "ಬ್ಲೂ ವೇವ್ಸ್" ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿ ಶಾಂತಿಯುತ ಸಮಾಜದ ನಿರ್ಮಾಣದಲ್ಲಿ ಕೈ ಜೋಡಿಸಲಿದೆ ಎಂದೂ ನಿರ್ವಾಹಕ ತಂಡವು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಲವಾರ ಸಾಮಾಜಿಕ ಮುಖಂಡರು ಮತ್ತು ಬರಹಗಾರರು ಬ್ಲೂ ವೇವ್ಸ್ ಜೊತೆ ಕೈ ಜೋಡಿಸಿದ್ದು, ಭಾನುವಾರ "ಬ್ಲೂ ವೇವ್ಸ್(ನೀಲಿ ತೆರೆಗಳು)" ಫೇಸ್ಬುಕ್ ಪೇಜ್ ಸಾರ್ವಜನಿಕರಿಗೆ ತೆರವಾಗಲಿದ್ದು ಯುವ ಬರಹಗಾರರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ